LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳಗ್ಗೆ ವಾಕಿಂಗ್‌ ಹೊರಟಿದ್ದ ವಕೀಲನಿಗೆ ಗುಂಡಿಕ್ಕಿ ಹತ್ಯೆ

Advertisement
Advertisement
ಲಕ್ನೋ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಕೀಲನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹಿರಿಯ ವಕೀಲ ರಾಜೀವ್‌ ಸಿಂಗ್‌ (45) ಹತ್ಯೆಗೀಡಾದ ವ್ಯಕ್ತಿ. ಶೂಟೌಟ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುಂಡಿನ ದಾಳಿ ನಡೆಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ರಾಜೀವ್‌ ಸಿಂಗ್‌ ಎಂದಿನಂತೆ ಬೆಳಗ್ಗೆ ವಾಕಿಂಗ್‌ ಹೋಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ವಕೀಲನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿಗೆ ವಕೀಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆ ಮಾಡಿ ಆರೋಪಿಗಳು ಬೈಕ್‌ನಲ್ಲಿ ಎಸ್ಕೇಪ್‌ ಆಗಲು ಮುಂದಾಗಿ ಪೇಚಿಗೆ ಸಿಲುಕಿದ ಪ್ರಸಂಗವೂ ನಡೆಯಿತು. ಬೈಕ್‌ ಕಿಕ್‌ ಸ್ಟಾರ್ಟ್‌ ಮಾಡುವಾಗ ತಕ್ಷಣಕ್ಕೆ ಸ್ಟಾರ್ಟ್‌ ಆಗಿಲ್ಲ. ಇದರಿಂದ ಕೆಲಕಾಲ ಆರೋಪಿಗಳು ಕೂಡ ಆತಂಕಕ್ಕೆ ಒಳಗಾಗಿದ್ದರು. ಬೈಕ್‌ ಪೆಡಲ್‌ ಅನ್ನು ನಿರಂತರವಾಗಿ ತುಳಿದರೂ ಬೈಕ್‌ ಸ್ಟಾರ್ಟ್‌ ಆಗಲಿಲ್ಲ. ಆಗ ದಾಳಿಕೋರರನ್ನು ಹಿಡಿದು ಕೆಲವರು ಓಡಿ ಬಂದರು. ಅಷ್ಟೊತ್ತಿಗೆ ಬೈಕ್‌ ಸ್ಟಾರ್ಟ್‌ ಆಗಿ ಆರೋಪಿಗಳು ಎಸ್ಕೇಪ್‌ ಆದರು.

ಸಿಂಗ್ ಈ ಹಿಂದೆ ಅರ್ಜಿ ಸಲ್ಲಿಸಿ, ತನ್ನ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಗ್ರಾಮದ ಮಾಜಿ ಅಧ್ಯಕ್ಷ ಹಾಗೂ ವಕೀಲರ ಮೇಲೆ ಈ ಹಿಂದೆ ಎರಡು ಬಾರಿ ಹಲ್ಲೆ ನಡೆದಿತ್ತು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಲಾರ ಗಡಿಯಲ್ಲಿ ಪೆಟ್ರೋಲ್ ಮಾಫಿಯಾ – ಟ್ಯಾಂಕರ್‌ಗಳಿಂದ ಕದ್ದು, ಕಡಿಮೆ ಬೆಲೆಗೆ ಮಾರಾಟ2028ರಲ್ಲಿ ಕಾಂಗ್ರೆಸ್ ಸ್ಥಾನಗಳು 50-60ಕ್ಕೆ ಕುಸಿತ: ಬಿವೈವಿನಮಗೇ ಕುಡಿಯೋಕೆ ನೀರಿಲ್ಲ, ಅವರಿಗೆ ಕೊಡಿ ಅಂದ್ರೆ ಹೇಗೆ? – ಪರಮೇಶ್ವರ್ ಕಿಡಿನಮಗೇ ಕುಡಿಯೋಕೆ ನೀರಿಲ್ಲ, ತಮಿಳುನಾಡಿಗೆ ಬಿಟ್ರೆ ಬೀದಿಗಿಳಿದು ಉಗ್ರ ಹೋರಾಟ – ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ – ಹೆಡ್‌ ಕಾನ್ಸ್‌ಟೇಬಲ್‌ಗೆ ಹಿಗ್ಗಾಮುಗ್ಗ ಥಳಿತಪ್ರೀತಿಯ ಬಲೆಗೆ ಬಿದ್ದು ಗರ್ಭಿಣಿಯಾದ ಅಪ್ರಾಪ್ತೆ – ಗಂಡು ಮಗುವಿಗೆ ಜನ್ಮ, ಪ್ರಿಯಕರನ ವಿರುದ್ಧ ಪೋಕ್ಸೋ ಕೇಸ್‌ತಮಿಳುನಾಡಿಗೆ ಕಾವೇರಿ ನೀರು – ಜು.31ಕ್ಕೆ ಮಂಡ್ಯದಲ್ಲಿ ಬೃಹತ್‌ ಹೋರಾಟಕ್ಕೆ ಕರೆಕೊಟ್ಟ ವಿಜಯೇಂದ್ರಕಾವೇರಿ ಜಲ ವಿವಾದ ಚರ್ಚೆಗೆ ತಮಿಳುನಾಡು ಪಟ್ಟು – ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್ ಸಂಸದರಾಹುಲ್ ಗಾಂಧಿ ʻಮೂರ್ಖʼ ಹೇಳಿಕೆಗೆ ರಿಜಿಜು ತೀವ್ರ ಆಕ್ಷೇಪ – ಲೋಕಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು – ಜೆಡಿಎಸ್ ಆಗ್ರಹ