LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿ ಸಚಿವೆ ಪಂಕಜಾ ಮುಂಡೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ – ಚುನಾವಣಾ ಪ್ರಚಾರ ರದ್ದು

Advertisement
Advertisement
ಮುಂಬೈ: ಬಿಜೆಪಿ ನಾಯಕಿ ಹಾಗೂ ರಾಜ್ಯ ಪರಿಸರ ಮತ್ತು ಪಶುಸಂಗೋಪನಾ ಸಚಿವೆ ಪಂಕಜಾ ಮುಂಡೆ  ಅವರ ಹೆಲಿಕಾಪ್ಟರ್‌ನಲ್ಲಿ ಮಂಗಳವಾರ ತಾಂತ್ರಿಕ ದೋಷ ಕಂಡುಬಂದಿದೆ. ಹೀಗಾಗಿ ಲಾತೂರ್‌  ಚುನಾವಣಾ ಪ್ರಚಾರ ಕಾರ್ಯಕ್ರಮವನ್ನ ದಿಢೀರ್‌ ರದ್ದುಗೊಳಿಸಲಾಗಿದೆ.

ಇಂದು ಜಿಲ್ಲಾ ಚುನಾವಣಾ ಪ್ರಚಾರಕ್ಕಾಗಿ ಪಂಕಜಾ ಮುಂಡೆ ಅವರು ಮಹಾರಾಷ್ಟ್ರದಲ್ಲಿ ಸಂಭಾಜಿನಗರ ರಿಂದ ಲಾತೂರ್‌ಗೆ ತೆರಳಬೇಕಿತ್ತು. ಈ ವೇಳೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿತು. ಹಾರಾಟ ನಡೆಸುವ ಮೊದಲೇ ಪೈಲಟರ್‌ ಈ ವಿಷಯ ಗಮನಕ್ಕೆ ತಂದಿದ್ದರಿಂದ ಲಾತೂರ್‌ ಪ್ರಯಾಣವನ್ನ ರದ್ದುಗೊಳಿಸಲಾಯಿತು.

ಸೋಮವಾರ (ಫೆ.2) ಪಂಕಜಾ ಮುಂಡೆ ಅವರು ಪಿಶೋರ್, ಘಟನಂದ್ರ, ಚೌಕಾ, ಅಡ್ಗಾಂವ್, ಬಜನಗರ ಮುಂತಾದ ಅವರ ಸ್ಥಳಗಳಲ್ಲಿ ಚುನಾವಣಾ ಪೂರ್ವ ಸಭೆಗಳನ್ನ ನಡೆಸಿದ್ದರು. ಪ್ರಚಾರ ಕಾರ್ಯ ಮುಗಿದ ಬಳಿಕ ಛತ್ರಪತಿ ಸಂಭಾಜಿನಗರದಲ್ಲಿ ವಾಸ್ತವ್ಯ ಹೂಡಿಸಿದ್ದರು. ಇಂದು (ಮಂಗಳವಾರ) ಬೆಳಗ್ಗೆ ಲಾತೂರ್, ಧಾರಶಿವ ಮತ್ತು ಸೋಲಾಪುರ ಸೇರಿ 3 ಜಿಲ್ಲೆಗಳಲ್ಲಿ ಯೋಜಿತ ಸಭೆಗಳಿಗೆ ಹಾಜರಾಗಬೇಕಿತ್ತು. ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷದ ಬಗ್ಗೆ ಪೈಲಟ್‌ ಮಾಹಿತಿ ನೀಡಿದ ಹಿನ್ನೆಲೆ ಚುನಾವಣಾ ಪ್ರಚಾರ ಕಾರ್ಯಗಳನ್ನ ರದ್ದುಗೊಳಿಸಲಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶೂಟೌಟ್‌ಗೆ ಆದೇಶ ನೀಡೋದು ಮ್ಯಾಜಿಸ್ಟ್ರೇಟ್‌ಗಳು, ಅಮಿತ್‌ ಶಾ ಅಲ್ಲ : ರಾಹುಲ್‌ಗೆ ಜಿತೇಂದ್ರ ಸಿಂಗ್‌ ತಿರುಗೇಟುಒಂದು ರಾಷ್ಟ್ರ, ಒಂದು ಚುನಾವಣೆ – ವರದಿ ಸಲ್ಲಿಕೆಗೆ ಅವಧಿ ವಿಸ್ತರಣೆಚಿಲ್ಲರೆ ಇಲ್ಲವೆಂದು ಸಚಿವರನ್ನು ಬಸ್ಸಿನಿಂದ ಕೆಳಗಿಳಿಸಿದ್ದ ನಿರ್ವಾಹಕನ ಅಮಾನತು ವಾಪಸ್ಕಾಫಿ ತೋಟದಲ್ಲಿ ಕೆಲಸದ ವೇಳೆ ಮರ ಬಿದ್ದು ಇಬ್ಬರು ಮಹಿಳೆಯರ ದುರ್ಮರಣಕೆಲಸದ ಸಮಯದಲ್ಲಿ ಪಾರ್ಟಿ – 6 ಮಂದಿ ಪಿಡಿಓಗಳು ಸಸ್ಪೆಂಡ್ಕರ್ನಾಟಕ ಮತದಾರರ ಪಟ್ಟಿಯಿಂದ 84.31 ಲಕ್ಷ ಮಂದಿ ಔಟ್: ಚುನಾವಣಾ ಆಯೋಗಪಿಎಂ ಸೂರ್ಯಘರ್ ಯೋಜನೆಗೆ ಭಾರೀ ಸ್ಪಂದನೆ, 48 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಲಾಭ – ಪ್ರಹ್ಲಾದ್ ಜೋಶಿಸಿಎಂ ಸ್ವಕ್ಷೇತ್ರದಲ್ಲಿ ಬರ ಪರಿಶೀಲನೆ ನಡೆಸಿದ ಬಿಜೆಪಿ ನಿಯೋಗ – ಶೀಘ್ರ ಬರ ಪರಿಹಾರ ಘೋಷಣೆಗೆ ಒತ್ತಾಯಸಿಎಂ ಸ್ವಕ್ಷೇತ್ರದಲ್ಲಿ ಬರ ಪರಿಶೀಲನೆ ನಡೆಸಿದ ಬಿಜೆಪಿ ನಿಯೋಗ – ಶೀಘ್ರ ಬರ ಪರಿಹಾರ ಘೋಷಣೆಗೆ ಒತ್ತಾಯ‘ವಂದೇ ಮಾತರಂ’ಗೆ ಅವಮಾನ ಮಾಡಿದ್ರೆ 3 ವರ್ಷ ಜೈಲು – ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ