LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗದಗ ರೈಲು ನಿಲ್ದಾಣದಲ್ಲಿ 9 ಲಕ್ಷ ರೂ. ಮೌಲ್ಯದ 19 ಕೆಜಿ ಗಾಂಜಾ ಜಪ್ತಿ

Advertisement
Advertisement

ಗದಗ: ಗೋವಾಕ್ಕೆ ತೆರಳುತ್ತಿದ್ದ ಶಾಲಿಮಾರ-ವಾಸ್ಕೋ ಎಕ್ಸ್‌ಪ್ರೆಸ್ (Gadag) ರೈಲಿನಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು, ನಗರದ ರೈಲ್ವೆ ಪೊಲೀಸರು ಮಾದಕವಸ್ತುವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಇಂದು ಬೆಳಿಗ್ಗೆ 8:06 ರ ಸುಮಾರಿಗೆ, ಶಾಲಿಮಾರದಿಂದ ವಾಸ್ಕೋಗೆ ತೆರಳುತ್ತಿದ್ದ ಶಾಲಿಮಾರ-ವಾಸ್ಕೋ ಎಕ್ಸ್‌ಪ್ರೆಸ್ ರೈಲಿನ ಇಂಜಿನ್ ಹಿಂಭಾಗದ ಜನರಲ್ ಕೋಚ್‌ನ ಶೌಚಾಲಯದ ಬಳಿ 9.56 ಲಕ್ಷ ರೂಪಾಯಿ ಮೌಲ್ಯದ 19.300 ಕೆಜಿ ಗಾಂಜಾ ಪತ್ತೆಯಾಗಿದೆ.

ನಗರದ ರೈಲ್ವೆ ಪೊಲೀಸ್ ಠಾಣೆ ಪೊಲೀಸರು ಎಂದಿನಂತೆ ಮಾದಕ ವಸ್ತುಗಳ ಪತ್ತೆ ಹಾಗೂ ಪರಿಶೀಲನೆ ನಡೆಸುತ್ತಿದ್ದ ವೇಳೆ ಎರಡು ಬಿಳಿ ಬಣ್ಣದ ಚೀಲಗಳು ಪತ್ತೆಯಾಗಿವೆ. ಚೀಲಗಳು ಯಾರದ್ದು ಎಂದು ಪ್ರಯಾಣಿಕರನ್ನು ವಿಚಾರಿಸಿದರೂ ಯಾರೂ ಮುಂದೆ ಬಂದಿಲ್ಲ. ಅನುಮಾನಗೊಂಡ ಪೊಲೀಸರು ಎರಡೂ ಚೀಲಗಳನ್ನು ರೈಲಿನಿಂದ ಕೆಳಗಿಳಿಸಿ ಪರಿಶೀಲಿಸಿದಾಗ ಅವುಗಳಲ್ಲಿ ಗಾಂಜಾ ಇರುವುದು ಬೆಳಕಿಗೆ ಬಂದಿದೆ. 

ಎರಡು ಚೀಲಗಳ ಪೈಕಿ ಒಂದರಲ್ಲಿ 5.64 ಲಕ್ಷ ರೂ. ಮೌಲ್ಯದ 11.700 ಕೆಜಿ ಗಾಂಜಾ, ಮತ್ತೊಂದರಲ್ಲಿ 3.92 ಲಕ್ಷ ರೂ. ಮೌಲ್ಯದ 7.600 ಕೆಜಿ ಗಾಂಜಾ ಪತ್ತೆಯಾಗಿದೆ. ಒಟ್ಟಾರೆ 9.56 ಲಕ್ಷ ರೂ. ಮೌಲ್ಯದ 19.300 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆದರೆ, ಈ ಗಾಂಜಾ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಯಾರು ಸಾಗಿಸುತ್ತಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ತನಿಖಾಧಿಕಾರಿ ಬಿ.ಎನ್. ರಾಮನಗೌಡ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
E20 इंधनामुळे वाहने खरंच बिघडतात का? नितीन गडकरींनी संसदेत दिलेले उत्तर काय?ಆಗಸ್ಟ್ 29 ರಂದು ಹಸೆಮಣೆ ಏರಲಿದ್ದಾರೆ ನಟ ಚಿಕ್ಕಣ್ಣಗದಗ ರೈಲು ನಿಲ್ದಾಣದಲ್ಲಿ 9 ಲಕ್ಷ ರೂ. ಮೌಲ್ಯದ 19 ಕೆಜಿ ಗಾಂಜಾ ಜಪ್ತಿಕೈಕಾಲು ಸರಿಯಿದ್ರೂ ಶೋಕಿ ಜೀವನಕ್ಕೆ ಅಂಗವಿಕಲನ ವೇಷ – ಖತರ್ನಾಕ್ ಭಿಕ್ಷುಕನ ಅಸಲಿ ಬಣ್ಣ ಬಯಲುಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ.ಬಿ.ಪಾಟೀಲ್‌ಶೂಟೌಟ್‌ಗೆ ಆದೇಶ ನೀಡೋದು ಮ್ಯಾಜಿಸ್ಟ್ರೇಟ್‌ಗಳು, ಅಮಿತ್‌ ಶಾ ಅಲ್ಲ : ರಾಹುಲ್‌ಗೆ ಜಿತೇಂದ್ರ ಸಿಂಗ್‌ ತಿರುಗೇಟುಒಂದು ರಾಷ್ಟ್ರ, ಒಂದು ಚುನಾವಣೆ – ವರದಿ ಸಲ್ಲಿಕೆಗೆ ಅವಧಿ ವಿಸ್ತರಣೆಚಿಲ್ಲರೆ ಇಲ್ಲವೆಂದು ಸಚಿವರನ್ನು ಬಸ್ಸಿನಿಂದ ಕೆಳಗಿಳಿಸಿದ್ದ ನಿರ್ವಾಹಕನ ಅಮಾನತು ವಾಪಸ್ಕಾಫಿ ತೋಟದಲ್ಲಿ ಕೆಲಸದ ವೇಳೆ ಮರ ಬಿದ್ದು ಇಬ್ಬರು ಮಹಿಳೆಯರ ದುರ್ಮರಣಕೆಲಸದ ಸಮಯದಲ್ಲಿ ಪಾರ್ಟಿ – 6 ಮಂದಿ ಪಿಡಿಓಗಳು ಸಸ್ಪೆಂಡ್